ತಿಂಗಳ ಹಿಂದೆ ವಿಜ್ಞಾನ ಪತ್ರಿಕೆಗಳಲ್ಲಿ ಸುದ್ದಿಯೊಂದು ತಣ್ಣನೆ ಪ್ರಕಟವಾಗಿತ್ತು. ‘ಇ-ಕೊಲಿ’ ಬ್ಯಾಕ್ಟೀರಿಯಾದಿಂದ ಜೀನ್ ಒಂದನ್ನು ತೆಗೆದು, ಗುಣಲಕ್ಷಣಗಳನ್ನು ಬದಲಿಸಿ, ಮರು ಜೋಡಣೆ ಮಾಡಿದ್ದರ ಬಗ್ಗೆ ಅದರಲ್ಲಿ ವಿವರಿಸಲಾಗಿತ್ತು. ‘ಇ-ಕೊಲಿ’ ಬಗ್ಗೆ ಕೇಳಿದ್ದೀರಲ್ಲ? ಲಕ್ಷಾಂತರ ಸಂಖ್ಯೆಯಲ್ಲಿರುವ ಇಂಥ ಬ್ಯಾಕ್ಟೀರಿಯಗಳಿಗೆ ನಮ್ಮ ಕರುಳೇ ಆಸರೆ. ವೈಟಮಿನ್‍ಗಳ (ಜೀವಸತ್ವ) ಉತ್ಪಾದನೆಯ ಮೂಲಕ ದೇಹವನ್ನು ಸುಸ್ಥಿಯಲ್ಲಿಡಬಲ್ಲ ಈ ಏಕಾಣುಜೀವಿಗಳು, ಕರುಳಿನ ಕೆಲಸ ಸುಗಮವಾಗಿ ಸಾಗುವಂತೆ ನೋಡಿಕೊಳ್ಳುತ್ತವೆ. ಅತ್ಯವಶ್ಯಕವಾದ ವೈಟಮಿನ್-ಕೆ ಮತ್ತು ಬಿ-ಕಾಂಪ್ಲೆಕ್ಸ್‍ಗಳನ್ನು ತಯಾರಿಸುವುದು ‘ಇ-ಕೊಲಿ’ಯೇ. ಈ ‘ಕೊಲಿ’ಗೆ ಇಂಥ ಹೆಸರು ಬರಲು ಕಾರಣ 1885ರಲ್ಲಿ ಎಶ್ಚೆರಿಶ್ ಎಂಬ ವಿಜ್ಞಾನಿ, ಈ ಏಕಾಣುಜೀವಿಯನ್ನು ಪ್ರತ್ಯೇಕಿಸಿ, ಅವುಗಳ ಗುಣಲಕ್ಷಣಗಳ ಬಗ್ಗೆ ಮೊತ್ತ ಮೊದಲ ಬಾರಿಗೆ ಪ್ರಬಂಧವನ್ನು ಮಂಡಿಸಿದ್ದ. ಇನ್ನು ‘ಜೀನ್’ ಅಥವಾ ‘ವಂಶವಾಹಿ’ ಬಗ್ಗೆ ನೀವು ಕೇಳಿರುತ್ತೀರಿ. ವಂಶಪಾರಂಪರ್ಯವಾಗಿ ಪಡೆದ ಕಣ್ಣಿನ ಬಣ್ಣ, ಮೂಗಿನ ಡೊಂಕು, ಗೂರಲು ಕೆಮ್ಮುಗಳಿಗೆಲ್ಲ ಈ ‘ಜೀನ್’ಗಳೆಂಬ ಗುಣಾಣುಗಳೇ ಕಾರಣ. ಸಸ್ಯ ಹಾಗೂ ಪ್ರಾಣಿವರ್ಗಕ್ಕೆ ಸೇರಿದ ಎಲ್ಲ ಜೀವಿಗಳಲ್ಲಿಯೂ ವಿಶಿಷ್ಟವಾದ ‘ಜೀನ್’ಗಳಿರುತ್ತವೆ.
ನಮ್ಮೆಲ್ಲ ಬೆಳವಣಿಗೆಗಳಿಗೆ ಮೂಲಾಧಾರ ‘ಪ್ರೋಟೀನ್’ಗಳು, ಅಲ್ಲವೆ? ನಮ್ಮ ದೇಹದ ಪ್ರತಿಯೊಂದು ಕೋಶಗಳಲ್ಲೂ ‘ಪ್ರೋಟೀನ್’ ಉತ್ಪತ್ತಿಯಾಗುತ್ತವೆ. ನಿಮ್ಮ ಮಾಹಿತಿಗಾಗಿ, ನಮ್ಮ ದೇಹದಲ್ಲಿ ಕನಿಷ್ಟ ಹತ್ತು ಲಕ್ಷ ಕೋಟಿ ಜೀವಕೋಶಗಳಿವೆ. ಉದಾಹರಣೆಗೆ ಇವುಗಳಲ್ಲಿ ಕರುಳಿನ ಜೀವಕೋಶಗಳು ಆಹಾರವನ್ನು ಜೀರ್ಣಿಸಬಲ್ಲ ಪ್ರೋಟೀನ್ ಉತ್ಪಾದಿಸಿದರೆ, ಮೇದೋಜೀರಕಾಂಗದ ಜೀವಕೋಶಗಳು ‘ಇನ್ಸುಲಿನ್’ ತಯಾರಿಸುತ್ತವೆ. ಅಂತೆಯೇ ಸ್ನಾಯುಗಳು ಸಂಕೋಚ-ವಿಕಾಸಕ್ಕೆ ಬೇಕಾದ ಪ್ರೋಟೀನನ್ನು ತಯಾರಿಸಿಕೊಂಡರೆ, ಕಣ್ಣಿನ ಜೀವಕೋಶಗಳು ಬೆಳಕಿನ ಹರಿದಾಟವನ್ನು ನಿಯಂತ್ರಿಸುವ ಪ್ರೋಟೀನನ್ನು ನಿರ್ಮಿಸಿಕೊಳ್ಳುತ್ತವೆ. ತನ್ನಲ್ಲಿ ಅಂಠದೊಂದು ಪ್ರೋಟೀನ್ ಉತ್ಪಾದಿಸುವ ಸಾಮರ್ಥ್ಯವಿದ್ದರೂ, ನಿಮ್ಮ ಕಣ್ಣಿನ ಕೋಶಗಳು ಜೀರ್ಣಕೋಶಧ ಪ್ರೋಟೀನ್ ಅನ್ನು ಉತ್ಪಾದಿಸುವುದಿಲ್ಲ. ಇಲ್ಲಿ ನಿಯಂತ್ರಕನಂತೆ ಕಾರ್ಯ ನಿರ್ವಹಿಸುವುದು, ‘ಜೀನ್’ಗಳೇ.
ಈ ಜೀನ್‍ಗಳನ್ನು ಹೀಗೆಂದು ವಿವರಿಸಬಹುದು. ನಮ್ಮ ಪ್ರತಿಯೊಂದು ಜೀವಕೋಶಗಳಲ್ಲೂ ಒಂದು ಕೋಶಕೇಂದ್ರವಿರುತ್ತದೆ. ಈ ಕೇಂದ್ರದಲ್ಲಿ ತಂದೆ-ತಾಯಂದಿರಿಂದ ತಲಾ 23ರಂತೆ ಬಳುವಳಿಯಾಗಿ ಬಂದ ‘ವರ್ಣತಂತು’ಗಳು ಅಥವಾ ‘ಕ್ರೋಮೋಸೋಮ್’ಗಳು ಹುದುಗಿರುತ್ತವೆ. ಈ ವರ್ಣತಂತುವಿನಲ್ಲಿ ಸುರುಳಿ ಸುರುಳಿಯಾಗಿ ‘ಡೈ-ಆಕ್ಸಿರೈಬೋ ನ್ಯೂಕ್ಲಿಯಿಕ್ ಆಮ್ಲ’ದ (ಡಿ.ಎನ್.ಎ.) ಎಳೆಗಳಿರುತ್ತವೆ. ಡಿ.ಎನ್.ಎ. ನಲ್ಲಿ ‘ಅಡಿನೈನ್’, ‘ಸೈಟೋಸಿನ್’, ‘ಗಾನೈನ್’ ಮತ್ತು ’ಥೈಮೈನ್’ ಎಂಬ ರಾಸಾಯನಿಕಗಳು ಮೆಟ್ಟಿಲಿನಂತೆ ಸಂಯೋಜನೆಯಾಗಿರುತ್ತವೆ. ಇಂಥ ಡಿ.ಎನ್.ಎ. ಎಳೆಯ ಒಂದು ನಿರ್ದಿಷ್ಟ ತುಣಕನ್ನು ‘ಜೀನ್’ ಅಥವಾ ‘ವಂಶವಾಹಿ’ ಎಂದು ಗುರುತಿಸಲಾಗುತ್ತದೆ. ಮೇಲೆ ತಿಳಿಸಿದ ನಾಲ್ಕು ರಾಸಾಯನಿಕ ಪರಮಾಣುಗಳು, ಡಿ.ಎನ್.ಎ. ಎಳೆಯಲ್ಲಿ ತಲಾ ಮೂರರಂತೆ ಒಂದು ವಿಶಿಷ್ಟ ಕ್ರಮದಲ್ಲಿ ಜೋಡಣೆಯಾಗಿರುತ್ತವೆ. ಜೀವಕೋಶವೊಂದರಲ್ಲಿ ನಿರ್ದಿಷ್ಟ ಪ್ರೋಟೀನ್ ಉತ್ಪಾದನೆಯಾಗಲು ಈ ತ್ರಿವಳಿಗಳೇ ಕಾರಣ. ಯಾವ ತ್ರಿವಳಿಯ ಪಕ್ಕದಲ್ಲಿ ಮತ್ಯಾವ ತ್ರಿವಳಿ ಕುಳಿತಿದೆಯೆಂಬ ‘ಕ್ರಮಾನುಗತಿ’ ಅಥವಾ ‘ಸೀಕ್ವೆನ್ಸಿಂಗ್’ ರಚನೆಯನ್ನು ಅರಿತುಕೊಳ್ಳಲು ಮಾಡಿದ ಮಹಾನ್ ಪ್ರಯತ್ನವೇ ‘ಮಾನವ ಜೀನೋಮ್ (ಜೀನ್+ಕ್ರೋಮೋಸೋಮ್)’ ಯೋಜನೆ. ಇದರಲ್ಲಿ ಸರಿ ಸುಮಾರು ಮೂವತ್ತು ಸಹಸ್ರ ವಿಶಿಷ್ಟ ಹಾಗೂ ಪ್ರಮುಖ ‘ಜೀನ್’ಗಳಲ್ಲಿ ಪ್ರತಿಯೊಂದರ ತುಣಕಿನಲ್ಲಿಯೂ ಹುದುಗಿರುವ ಅಗಾಧ ಮಾಹಿತಿಯನ್ನು ಬಿಚ್ಚಿಡುವ ಹರಸಾಹಸವನ್ನು ನಡೆಸಲಾಗಿತ್ತು. ಇದನ್ನೆಲ್ಲ ಬಿಡಿಸಿ, ಜೀನ್ ತುಣಕೊಂದು ಯಾವ ರೋಗಕ್ಕೆ ಅಥವಾ ಯಾವ ಮೂಲಗುಣಕ್ಕೆ ಕಾರಣವೆಂಬುದನ್ನು ಕಂಡುಹಿಡಿಯಲು ವಿಜ್ಞಾನಿಗಳು ಹೊರಟಿದ್ದಾರೆ. ಈ ‘ಬ್ರಹ್ಮ ಲಿಖಿತ’ವನ್ನು ಅರಿಯುವ ಪ್ರಯತ್ನವೇ ಜೀನ್‍ಗಳ ನೀಲನಕಾಶೆ ಬರೆಯುವ ಅಥವಾ ಮೋಜಣಿ ಕಾರ್ಯ. ಎಲ್ಲ ಮಾನವರಲ್ಲಿರುವ ಜೀನ್‍ಗಳು ಬಹುತೇಕ ಒಂದೇ (ಶೇಕಡ 99.8ರಷ್ಟು). ಉಳಿದ ಭಾಗದಿಂದ ವ್ಯಕ್ತಿಯೊಬ್ಬ ವಿಶಿಷ್ಟ ಗುಣ ಲಕ್ಷಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿದೆ.
‘ಜೀನ್’ ಪುರಾಣವನ್ನು ಅಲ್ಲಿಗೇ ಬಿಟ್ಟು, ನಮ್ಮ ‘ಇ-ಕೊಲಿ’ಯತ್ತ ಕಣ್ಣು ಹಾಯಿಸೋಣ. ಸಾಮಾನ್ಯವಾಗಿ ಇ-ಕೊಲಿಗಳು ಬರಿಗಣ್ಣಿಗೆ ಕಾಣಿಸದು. ಜತೆಗೆ ಸೂಕ್ಷ್ಮದರ್ಶದಡಿಯಲ್ಲಿ ಎಷ್ಟೇ ದೊಡ್ಡದಾಗಿ ಹಿಗ್ಗಿಸಿದರೂ, ವಿಶೇಷ ಬೆಳಕಿನ ವ್ಯವಸ್ಥೆಯಿಲ್ಲದಿದ್ದರೆ ನಮ್ಮ ನೆಟ್ ನೋಟದಿಂದ ದೂರವಾಗಬಹುದು. ಬೆಳಕಿಗೆ ಪ್ರತಿಸ್ಪಂದಿಸಬಲ್ಲ, ಬಿದ್ದ ಬೆಳಕನ್ನು ಮತ್ತಷ್ಟು ಪ್ರಜ್ವಲಿಸಬಲ್ಲ ಅಥವಾ ಪ್ರತಿದೀಪ್ತಿ (ಫ್ಲೋರೆಸೆಂಟ್) ಬೆಳಕನ್ನು ಹೊರಚಿಮ್ಮುವ ಗುಣಗಳು ‘ಇ-ಕೊಲಿ’ಗಳಿಗೆ ಇರುವುದಿಲ್ಲ. ಈ ಹಿಂದೆ ‘ಅಂಬಲಿ ಮೀನು’ಗಳಿಗೆ (ಜೆಲ್ಲಿ ಫಿಶ್) ‘ಪ್ರತಿದೀಪ್ತಿ’ ಗುಣವನ್ನು ನೀಡುವ ‘ಜೀನ್’ಗಳನ್ನು ಪ್ರತ್ಯೇಕಿಸಿ, ‘ಇ-ಕೊಲಿ’ ಬ್ಯಾಕ್ಟೀರಿಯಾಗಳಿಗೆ ಅಳವಡಿಸಿ, ಅವುಗಳು ಸ್ವತಃ ಬೆಳಗುವಂತೆ ಮಾಡಲಾಗಿತ್ತು. ಇದೀಗ ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೊ ನಗರದಲ್ಲಿರುವ ‘ಕ್ಯಾಲಿಫೋರ್ನಿಯ ವಿವಿ’ಯಲ್ಲಿ ‘ಇ-ಕೊಲಿ’ ಬ್ಯಾಕ್ಟೀರಿಯಾಗಳಿಗೆ ಹೊಸತೊಂದು ಜೀನ್ ಅನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿದ್ದ ಬೆಳಕಿಗೆ ಪ್ರತಿಸ್ಪಂದಿಸಬಲ್ಲ ಗುಣ ಈ ಜೀನ್‍ಗಳಿಗಿರುತ್ತವೆ. ಹಳೆಯ ಕಾಲದ ಕ್ಯಾಮೆರಗಳಲ್ಲಿ ಫಿಲ್ಮ್ ರೋಲ್‍ಗಳನ್ನು ತುಂಬುವುದು ನಿಮಗೆ ಗೊತ್ತು. ಈ ಫಿಲ್ಮ್‍ಗಳಲ್ಲಿ ಲೇಪಿಸಿರುವ ರಾಸಾಯನಿಕಗಳಿಗೆ ಬಿದ್ದ ಬೆಳಕನ್ನು ನೆರಳಚ್ಚಾಗಿಸಿಕೊಳ್ಳುವ ಗುಣವಿರುತ್ತದಲ್ಲವೆ? ಈ ಗುಣದಿಂದಾಗಿಯೇ ಕ್ಯಾಮೆರಗಳ ಮೂಲಕ ನಾವು ಚಿತ್ರಗಳನ್ನು ತೆಗೆಯಬಹುದು. ‘ಇ-ಕೊಲಿ’ಗಳಿಗೆ ಕ್ಯಾಮೆರ ಫಿಲ್ಮ್‍ನ ಗುಣವನ್ನು ಅಳವಡಿಸಿದರೆ, ಅವುಗಳನ್ನು ಲೇಪಿಸಿದ ಹಾಳೆಯ ಮೇಲೆ ಚಿತ್ರಗಳ ನೆರಳಚ್ಚನ್ನು ಪಡೆಯಬಹುದು. ಕ್ಯಾಲಿಫೋರ್ನಿಯ ವಿವಿಯಲ್ಲಿ ದೊಡ್ಡದೊಂದು ಹುಲ್ಲಿನ ಹಾಸಿನಂತೆ ಬೆಳಕಿಗೆ ಪ್ರತಿಸ್ಪಂದಿಸಬಲ್ಲ ಗುಣವನ್ನು ಅಳವಡಿಸಿಕೊಂಡ ‘ಇ-ಕೊಲಿ’ಗಳನ್ನು ಹರಡಿನೋಡಲಾಗಿದೆ. ಬೆಳಕಿನ ಮೂಲ ಹಾಗೂ ಇ ‘ಕೊಲಿ’ ಹಾಸಿನ ನಡುವೆ ರಂಧ್ರಗಳಿರುವ ಚಿತ್ರವೊಂದನ್ನು ಇಟ್ಟಾಗ ಅದರ ನೆರಳಚ್ಚನ್ನು ಪಡೆಯಲಾಗಿದೆ.
ಇ-ಕೊಲಿಗಳ ಮೇಲೆ ಕುಚೇಷ್ಟೆ ನಡೆಸುವುದು ವಿಜ್ಞಾನಿಗಳ ಉದ್ದಿಶ್ಯವಲ್ಲ. ಸೂಕ್ಷ್ಮ ಜೀವಿಗಳನ್ನು ತಮ್ಮ ಅವಶ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕೆಂಬ ಹಂಬಲ ಅವರದು. ಉದಾಹರಣೆಗೆ, ಹತ್ತಿ, ಕತ್ತಾಳೆ, ಗೋಣಿ ಮತ್ತಿತರ ನಾರಿನ ಸಸ್ಯಗಳ ಜೀವಕೋಶಗಳಲ್ಲಿನ ಸೂಕ್ಷ್ಮ ತಂತುಗಳಲ್ಲಿ ಸೆಲ್ಯುಲೋಸ್ ಎಂಬ ಪದಾರ್ಥವಿರುತ್ತದೆ. ಕೃತಕ ನಾರು, ರೇಷ್ಮೆ ಇತ್ಯಾದಿಗಳನ್ನು ತಯಾರಿಸಲು ಸೆಲ್ಯುಲೋಸ್ ಅನ್ನು ಬಳಸಬಹುದು. ಈ ಸೆಲ್ಯುಲೋಸ್ ಅನ್ನು ವಿಭಜನೆ ಮಾಡುವ ಸಾಮರ್ಥ್ಯವಿರುವುದು ‘ಸೆಲ್ಯುಲೇಸ್’ ಎಂಬ ಕಿಣ್ವಕ್ಕೆ. ಗ್ಲುಕೋಸ್, ಎಥೆನಾಲ್ ಇತ್ಯಾದಿಯಾಗಿ ಸೆಲ್ಯುಲೋಸ್ ಅನ್ನು ಪರಿವರ್ತಿಸುವುದು ಹೆಚ್ಚಿನ ಲಾಭದಾಯಕ. ಹುಲ್ಲು, ಸೊಪ್ಪು ತಿನ್ನುವ ಬಹುತೇಕ ಸಸ್ಯಾಹಾರಿ ಪ್ರಾಣಿಗಳಲ್ಲಿ ಈ ಕಿಣ್ವ ಸ್ವಾಭಾವಿಕವಾಗಿ ಉತ್ಪಾದನೆಯಾಗುತ್ತದೆ. ಮನುಷ್ಯ ದೇಹದಲ್ಲಿ ಈ ಕಿಣ್ವ ಉತ್ಪಾದನೆಯಾಗದ ಕಾರಣ ಹುಲ್ಲು ನಮಗೆ ಅರಗುವುದಿಲ್ಲ. ಸದ್ಯಕ್ಕೆ ಪರ್ಯಾಯ ಇಂಧನವಾಗಿ ಎಥೆನಾಲ್ ಅನ್ನು ಬಳಸಲು ಹೆಚ್ಚಿನ ಉತ್ತೇಜನ ದೊರಕುತ್ತಿದೆ. ಸಾಮಾನ್ಯವಾಗಿ ಕಬ್ಬು, ಬೀಟ್‍ರೂಟ್, ಜೋಳ ಮತ್ತಿತರ ಆಹಾರ ಬೆಳೆಗಳಿಂದ ಎಥೆನಾಲ್ ಅನ್ನು ಉತ್ಪಾದಿಸುವ ಬದಲು ಸಕ್ಕರೆ ಕಾರ್ಖಾನೆಗಳಲ್ಲಿನ ತ್ಯಾಜ್ಯ ಪದಾರ್ಥಗಳನ್ನು ಸಂಸ್ಕರಿಸಿ ಎಥೆನಾಲ್ ತಯಾರಿಸುವುದು ಅಗ್ಗವಾಗುತ್ತದೆ. ಈ ನಿಟ್ಟಿನಲ್ಲಿ ಜೈವಿಕ ತ್ಯಾಜ್ಯ ಪದಾರ್ಥಗಳನ್ನು ಅತಿ ಅಗ್ಗದ ದರದಲ್ಲಿ, ಶೀಘ್ರವಾಗಿ ಎಥೆನಾಲ್ ಆಗಿ ಪರಿವರ್ತಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಮರಮುಟ್ಟುಗಳನ್ನು ನಯವಾಗಿ ಕೊರೆದು ಹುಡಿಯಾಗಿಸುವ ಗೆದ್ದಲು ನಿಮಗೆ ಗೊತ್ತು. ಇವುಗಳ ಕರುಳಿನಲ್ಲಿ ಸೆಲ್ಯುಲೋಸ್ ಅನ್ನು ಅರಗಿಸಿಕೊಳ್ಳಬಲ್ಲ ಸೆಲ್ಯುಲೇಸ್ ಕಿಣ್ವಗಳು ಹೇರಳವಾಗಿರುತ್ತವೆ. ಗೆದ್ದಲಿನ ಈ ಗುಣ ಸಾಮರ್ಥ್ಯಕ್ಕೆ ಕಾರಣವಾದ ಜೀನ್‍ಗಳ ಜಾತಕವನ್ನು ಬಿಡಿಸಿಟ್ಟಿರುವ ವಿಜ್ಞಾನಿಗಳು, ಅವುಗಳನ್ನು ರೂಪಿಸಿರುವ ಡಿ.ಎನ್.ಎ. ತುಣಕುಗಳ ಮಿಲಿಯಾಂತರ ವೈವಿಧ್ಯಗಳನ್ನು ಗುರುತಿಸಲು ಯಶಸ್ವಿಯಾಗಿದ್ದಾರೆ. ಅತ್ಯುಪಯುಕ್ತವಾದ ಹತ್ತು ವಿಶಿಷ್ಟ ತುಣಕುಗಳನ್ನು ಪ್ರತ್ಯೇಕಿಸಿ ತಮ್ಮ ಪ್ರಯೋಗಳನ್ನು ಮುಂದುವರಿಸಿದ್ದಾರೆ. ಇವೆಲ್ಲದರ ಫಲವೇನೆಂದರೆ, ಪ್ರೋಟೀನ್ ಆಧರಿತ ಔಷಧಗಳನ್ನು ರೂಪಿಸಿದಾಗ ಅವು ರಕ್ತದೊಳಗೆ ಸುಲಭವಾಗಿ ಮಿಳಿತವಾಗಬಲ್ಲವು. ಅಷ್ಟೇ ಅಲ್ಲ, ತಮ್ಮ ಗುರಿಯನ್ನು ಹಿಡಿದಿಟ್ಟುಕೊಂಡು ಕಾರ್ಯಾಚರಣೆ ನಡೆಸಬಲ್ಲವು. ಜತೆಗೆ ಅತ್ಯುನ್ನತ ಕಾರ್ಯಕ್ಷಮತೆಯಿಂದ ರಕ್ತದಲ್ಲಿರುವ ವಿಷವಸ್ತುವನ್ನು ಕರಗಿಸಬಲ್ಲವು.
ಔಷಧ ವಿಜ್ಞಾನಿಗಳ ಕೆಲಸವನ್ನು ಹಗುರವಾಗಿಸುವ ಇಂಥ ಅನೇಕ ಸಂಶೋಧನೆಗಳನ್ನು ಜೈವಿಕ ತಂತ್ರಜ್ಞರು ಹಮ್ಮಿಕೊಂಡಿದ್ದಾರೆ. ಇನ್ನು ಮುಂದೆ ವೈದ್ಯರಾಗಲಿ, ಔಶಧ ವಿಜ್ಞಾನಿಗಳಾಗಲಿ ಥೇಟ್ ಎಂಜಿನೀರ್‌ಗಳಂತೆ ಕಾರ್ಯನಿರ್ವಹಿಸಬಹುದು. ಅಂದರೆ, ತಮ್ಮ ಬಹುತೇಕ ಕಾರ್ಯಗಳನ್ನು ಹೊರಗುತ್ತಿಗೆ ಕೊಡಬಹುದು. ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿಕೊಂಡು ತಮ್ಮ ಕೆಲಸಗಳನ್ನು ಶೀಘ್ರದಲ್ಲಿಯೇ ಮುಗಿಸಬಹುದು. ಔಷಧವೊಂದನ್ನು ಸೃಷ್ಟಿಸಲು ಇದುವರೆಗೂ ಸಾಕಷ್ಟು ಹೆಣಗಾಡಬೇಕಿತ್ತು. ಸ್ವಾಭಾವಿಕವಾಗಿ ದೊರೆಯುವ ಕೆಲ ವಸ್ತುಗಳನ್ನು ಅಣುಗಾತ್ರಕ್ಕೆ ಇಳಿಸಿ, ತಿಳಿದ ರೋಗಗಳಿಗೆ ‘ನಿರೋಧಕ’ವಾಗಿದೆಯೆ? ಎಂಬ ಪರಿಶೀಲನೆ ಮಾಡಬೇಕಿತ್ತು. ಸಹಸ್ರಾರು ಪ್ರಯೋಗಗಳಲ್ಲಿ ಒಂದೋ ಎರಡೋ ಯಶಸ್ವಿಯಾಗಬಹುದಿತ್ತು. ರೊಗವೊಂದಕ್ಕೆ ಕಾರಣವಾದ ಸೂಕ್ಷ್ಮ ಜೀವಿಯು, ರಾಸಾಯನಿಕ ಅಣುವೊಂದರ ಜತೆ ಹೇಗೆ ಪ್ರತಿಕ್ರಿಯಿಸುತ್ತದೆ? ಎಂಬ ಮಾಹಿತಿ ಕೈಗೆಟಕುವಂತಿರಲಿಲ್ಲ. ಜಗತ್ತಿನಾದ್ಯಂತ ಕೋಟ್ಯಂತರ ಸಮ್ಶೋಧನಾ ಪ್ರಬಂಧಗಳಲ್ಲಿ ಹಾಗೂ ಜೀವವಿಜ್ಞಾನ ಮಾಹಿತಿ ಭಂಡಾರಗಳಲ್ಲಿ ಹುದುಗಿರಬಹುದಾದ ಮಾದರಿಗಳನ್ನು ಪರಿಶೀಲನೆ ಮಾಡುವ ಕೆಲಸಕ್ಕೆ ತಜ್ಞರ ದಂಡು ಬೇಕು. ಗಣಿಗಾರಿಕೆ ಮಾಡಿ, ಚಾಕಚಕ್ಯತೆಯಿಂದ ಮಾಹಿತಿ ಹೊರತೆಗೆಯಬೇಕು.
ಮಾಹಿತಿ ಗಣಿಯಲ್ಲಿಳಿದು ಹುಡುಕಾಟ ನಡೆಸಲು ಸೂಕ್ತ ಕಂಪ್ಯೂಟರ್ ಸಂಕೇತಗಳ ರಚನೆಯಿಂದ ಹಿಡಿದು ಆಸ್ಪತ್ರೆಗಳಲ್ಲಿನ ವೈದ್ಯಕೀಯ ಧಾಖಲೆಗಳಿಂದ ಆಕರ ಭಂಡಾರ ಸೃಷ್ಟಿಸುವ ತನಕ ಬಯೋಇನ್‍ಫರ್ಮೇಟಿಕ್ಸ್‍ನ ವ್ಯಾಪ್ತಿ ಹರಡಿದೆ. ಈ ಮಾಹಿತಿಯಿಂದ ಔಷಧ ಕಂಪನಿಗಳು ರೋಗವೊಂದಕ್ಕೆ ರಾಸಾಯನಿಕ ಮದ್ದು ಯಾವುದೆಂದು ಗುರುತಿಸಿದರೆ, ಅದನ್ನು ತಯಾರಿಸಿಕೊಡಲು ಸೂಕ್ತ ವಿಧಾನವೊಂದನ್ನು ಹುಡುಕಿಕೊಡಬಹುದು. ಯಾವುದೇ ವಸ್ತುವಿನ ಅಣುವೊಂದರ ಭೌತಿಕ ಮತ್ತು ರಾಸಾಯನಿಕ ರಚನೆಯನ್ನು ಕಂಪ್ಯೂಟರ್ ಮೂಲಕ ಪರಿಶೀಲಿಸಬಹುದು. ಅಗತ್ಯ ಸಾಫ್ಟ್‍ವೇರ್ ಸಲಕರಣೆಗಳ ಮೂಲಕ ‘ಮಾದರಿ’ಗಳನ್ನು ರಚಿಸಬಹುದು. ಜೀವಿಯೊಂದರ ಮೇಲೆ ಪ್ರಯೋಗ ನಡೆಸುವ ಮೊದಲು ಈ ರಾಸಾಯನಿಕಗಳ ವಿಶ್ಲೇಷಣೆ ನಡೆಸಬಹುದು. ಜಗತ್ತಿನಾದ್ಯಂತ ಔಷಧ ಕಂಪನಿಗಳು ದಿನವೊಂದಕ್ಕೆ ಸೃಷ್ಟಿಸುವ ವಿಶಿಷ್ಟ ರಾಸಾಯನಿಕ ಅಣುಗಳ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು. ಈ ಪ್ರತಿಯೊಂದು ಅಣುಗಳ ಜೈವಿಕ ಹೊಂದಾಣಿಕೆಯನ್ನು ಪರಿಶೀಲಿಸುವುದೇ ಒಂದು ದೊಡ್ಡ ಕೆಲಸ. ಕಂಪ್ಯೂಟರ್ ಮಾದರಿಯ ಮೂಲಕ ಈ ಅಣುವು ವಿಷಕಾರಿಯೆ? ಅಲ್ಲವೆ? ಎಂಬುದನ್ನು ಕಂಡುಹಿಡಿಯಬಹುದು. ಅಪಾರ ಹಣ ಮತ್ತು ಸಮಯ ಉಳಿತಾಯದ ಈ ಕಾರ್ಯದಿಂದ ಲಕ್ಷಾಂತರ ಪ್ರಾಣಿಗಳ ಜೀವ ಉಳಿಸಬಹುದು. ಕ್ಲಿಷ್ಟವಾದ ರಾಸಾಯನಿಕ ಲೆಕ್ಕಾಚಾರಗಳನ್ನು ಕಂಪ್ಯೂಟರ್ ತಲೆಗೇ ಕಟ್ಟುವುದರಿಂದ ಹೊಸ ಔಷಧವೊಂದನ್ನು ಶೀಘ್ರದಲ್ಲಿಯೇ ಸೃಷ್ಟಿಸಬಹುದು. ರಾಸಾಯನಿಕ ಮಿಶ್ರಣದ ಔಷಧವೊಂದು ಯಾವ ಬಂಧನದಲ್ಲಿ, ಯಾವ ಹಂದರದಲ್ಲಿ ಸ್ಥಿರವಾಗಿರಬಹುದೆಂಬ ಅಂಶವನ್ನು ಸಾಫ್ಟ್‍ವೇರ್ ಮೂಲಕ ನಿರ್ಧರಿಸಬಹುದು. ಮಳಿಗೆಗಳಲ್ಲಿನ ಜೀನಸುಗಳನ್ನು ಅರಸುವಂತೆ ಇನ್ನು ಮುಂದೆ ವಿಜ್ಞಾನಿಗಳು ತಮಗೆ ಬೇಕಾದ ಜೀನ್ಸ್ ಸಾಮಗ್ರಿಗಳನ್ನು ಖರೀದಿಸಿ, ಸಂಶೋಧನೆಗಳನ್ನು ಮುಂದುವರಿಸಬಹುದು.
(30-04-2007)

No comments:
Post a Comment