ನಿಮ್ಮ ಬಂಧುಗಳು ಅಥವಾ ಸ್ನೇಹಿತರ ಪೈಕಿ ಯಾರಿಗಾದರೂ ದೊಡ್ಡ ಶಸ್ತ್ರಚಿಕಿತ್ಸೆ ಆಗಿದ್ದರೆ, ಸ್ವಯಂಪ್ರೇರಿತ ‘ರಕ್ತದಾನಿ’ಗಳ ಪಟ್ಟಿಯೊಂದನ್ನು ನೀವು ಖಂಡಿತವಾಗಿ ಸಿದ್ಧ ಮಾಡಿಕೊಂಡಿರುತ್ತೀರಿ. ಎಲ್ಲರ ದೇಹದಲ್ಲಿ ಹರಿಯುವ ರಕ್ತದ ಬಣ್ಣ ಕೆಂಪೇ ಆಗಿದ್ದರೂ, ಗುಣಲಕ್ಷಣಗಳು ಭಿನ್ನವಾಗಿರುತ್ತವೆ. ರಕ್ತವನ್ನು ಪ್ರಧಾನವಾಗಿ ‘ಪಾಸಿಟಿವ್’ ಅಥವಾ ‘ನೆಗಟಿವ್’ ಸಮೂಹದಲ್ಲಿ ವಿಂಗಡಿಸಬಹುದು. ‘ಆರ್‌ಎಚ್ - Rh' ಎಂಬ ‘ಪ್ರತಿಜನಕ - antigen'ದ ಹಾಜರಿಯಿದ್ದರೆ ‘ಪಾಸಿಟಿವ್’ ಸಮೂಹ ಹಾಗೂ ಅದು ಗೈರುಹಾಜರಿದ್ದರೆ ‘ನೆಗಟಿವ್’ ಸಮೂಹ ಎಂದು ಪರಿಗಣಿಸಲಾಗುತ್ತದೆ. ಪ್ರತಿಜನಕಗಳೆಂದರೆ ಗೊತ್ತಲ್ಲ? ಯಾವುದೇ ರೋಗಜನಕಗಳು ಅಥವಾ ಪರೋಪಜೀವಿಗಳು ಅಥವಾ ಬಾಹ್ಯವಸ್ತುಗಳು ರಕ್ತವನ್ನು ಪ್ರವೇಶಿಸಿದೊಡನೆಯೆ ಅದರ ವಿರುದ್ಧ ಹೋರಾಡುವಂಥ ‘ಪ್ರತಿಕಾಯ - antibody'ಗಳನ್ನು ಉತ್ಪಾದಿಸುವ ಪದಾರ್ಥಗಳೇ ‘ಪ್ರತಿಜನಕ’ಗಳು. ಈ ಸಮೂಹಗಳಡಿಯಲ್ಲಿ ರಕ್ತವನ್ನು ‘ಏ’, ’ಬಿ’, ‘ಏಬಿ’ ಹಾಗೂ ‘ಓ’ ಎಂಬ ನಾಲ್ಕು ಗುಂಪುಗಳಲ್ಲಿ ಮರು ವಿಂಗಡಿಸಲಾಗುತ್ತದೆ. ಈ ವಿಭಜನೆ ರಕ್ತದ ಕೆಂಪುಕಣಗಳ ಹೊರಮೈಯ್ಯಲ್ಲಿ ಕಂಡು ಬರುವ ‘ಪ್ರತಿಜನಕ - antigen'ಗಳ ಮೇಲೆ ಆಧರಿತವಾಗಿರುತ್ತದೆ. ಕೆಂಪು ರಕ್ತಕಣಗಳ ಹೊರಮೈಯ್ಯಲ್ಲಿ ‘ಏ’, ‘ಬಿ’, ‘ಏ ಮತ್ತು ಬಿ’ಪ್ರತಿಜನಕಗಳಾ ಹಾಜರಿ ಇದ್ದರೆ ರಕ್ತದ ಗುಂಪು ಕ್ರಮವಾಗಿ ‘ಏ’, ‘ಬಿ’ ಹಾಗೂ ‘ಏಬಿ’ ಆಗಿರುತ್ತದೆ. ಯಾವುದೇ ಪ್ರತಿಜನಕ ಇಲ್ಲದಿದ್ದರೆ ಆ ರಕ್ತದ ಗುಂಪನ್ನು ‘ಓ’ ಎಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿನ ವಿಶೇಷತೆಯೇನೆಂದರೆ ‘ಏ’ ಪ್ರತಿಜನಕವು ‘ಬಿ’ಗೆ ವಿರುದ್ಧವಾದ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಅಂತೆಯೇ ‘ಬಿ’ ಪ್ರತಿಜನಕವು ‘ಏ’ಗೆ ವಿರುದ್ಧವಾದ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ‘ಏಬಿ’ ಗುಂಪಿನ ರಕ್ತದ ಪ್ರತಿಜನಕವು ಯಾವುದೇ ಪ್ರತಿಕಾಯಗಳನ್ನು ಉತ್ಪಾದಿಸುವುದಿಲ್ಲ. ‘ಓ’ ಗುಂಪಿನ ರಕ್ತದಲ್ಲಿ ‘ಏ’ಗೆ ವಿರುದ್ಧವಾದ ಹಾಗೂ ‘ಬಿ’ಗೆ ವಿರುದ್ಧವಾದ ಪ್ರತಿಕಾಯಗಳಿರುತ್ತವೆ. ಇದೊಂದು ಅರ್ಥವಾಗದ ಕ್ಲಿಷ್ಟ ಗಣಿತದ ಸಮಸ್ಯೆಯೆನಿಸಿದರೆ ಚಿಂತೆಯಿಲ್ಲ, ತಲೆಕೆಡಿಸಿಕೊಳ್ಳಬೇಡಿ. ಸರಳವಾಗಿ ಹೇಳಬೇಕೆಂದರೆ ಒಂದು ಸಮೂಹದ ರಕ್ತ ಮತ್ತೊಂದು ಸಮೂಹಕ್ಕೆ ಒಗ್ಗುವುದಿಲ್ಲ. ಅಂದರೆ ‘ಪಾಸಿಟಿವ್’ ಸಮೂಹಕ್ಕೆ ‘ಪಾಸಿಟಿವ್’ ಸಮೂಹದವರು ರಕ್ತದಾನ ಮಾಡಬಹುದು. ‘ನೆಗಟಿವ್’ ಸಮೂಹದವರು ‘ನೆಗಟಿವ್’ ಸಮೂಹದವರಿಗೆ ರಕ್ತ ನೀಡಬಹುದು. ಜತೆಗೆ ‘ಏ’ ಗುಂಪಿನವರು ‘ಏ’ ಗುಂಪಿನವರಿಗೆ ಹಾಗೂ ‘ಬಿ’ ಗುಂಪಿನವರು ‘ಬಿ’ ಗುಂಪಿನವರಿಗೆ ರಕ್ತವನ್ನು ದಾನ ಮಾಡಬಹುದು. ಜತೆಗೆ ‘ಓ’ ಗುಂಪಿನ ರಕ್ತವನ್ನು ‘ಏ’, ‘ಬಿ’ ಹಾಗೂ ‘ಏಬಿ’ ಗುಂಪಿನ ರಕ್ತ ಇರುವವರಿಗೆ ದಾನ ನೀಡಬಹುದು. ‘ಏ’ ಹಾಗೂ ‘ಬಿ’ ಗುಂಪಿನವರಿಬ್ಬರೂ ‘ಏಬಿ’ ಗುಂಪಿನ ರಕ್ತ ಇರುವವರಿಗೆ ದಾನ ನೀಡಬಹುದು.
ಈ ಪ್ರತಿಜನಕಗಳ ರೇಜಿಗೆಯಿಲ್ಲದ ರಕ್ತವನ್ನು ರೂಪಿಸುವ ಹಾಗಾದರೆ, ರಕ್ತ ಸಾರ್ವತ್ರಿಕವಾಗಬಹುದಲ್ಲವೆ? ಹೀಗೆಂದು ಚಿಂತಿಸುತ್ತಿದ್ದ ಡೆನ್ಮಾರ್ಕ್ ದೇಶದ ಕೋಪೆನ್‍ಹೇಗನ್ ವಿವಿಯ ವೈದ್ಯ ವಿಜ್ಞಾನಿ ಹೆನ್ರಿಕ್ ಕ್ಲೌಸನ್ ನೇತೃತ್ವದ ಅಂತಾರಾಷ್ಟ್ರೀಯ ತಂಡವು ಕೆಂಪು ರಕ್ತ ಕಣಗಳಲ್ಲಿನ ಯಾವ ಅಂಶವು ಪ್ರತಿಕಾಯಗಳನ್ನು ಸೃಷ್ಟಿ ಮಾಡುತ್ತವೆ, ಹಾಗೂ ಯಾವುದರಿಂದಾಗಿ ತನ್ನ ಗುಂಪಿನದಲ್ಲದ ಕೆಂಪು ರಕ್ತಕಣಗಳನ್ನು ನಾಶ ಮಾಡುತ್ತವೆ? ಎಂಬುದನ್ನು ಕಂಡುಕೊಂಡಿದೆ. ಉದಾಹರಣೆಗೆ ‘ಎ’ ಗುಂಪಿನ ರಕ್ತದಲ್ಲಿ ಉತ್ಪಾದನೆಯಾಗುವ ‘ಪ್ರತಿಕಾಯ’ಕ್ಕೆ ‘ಬಿ’ ಗುಂಪಿನ ರಕ್ತಕಣದ ಹೊರಮೈಯ್ಯಲ್ಲಿ ಅಂಟಿಕೊಂಡಿರುವ ವಿಶಿಷ್ಟ ಸಕ್ಕರೆಯಂಶವನ್ನು ಪತ್ತೆ ಮಾಡುವ ಸಾಮರ್ಥ್ಯವಿರುತ್ತದೆ. ಈ ಸಕ್ಕರೆಯಂಶದ ಉತ್ಪಾದನೆಗೆ ಅದರಲ್ಲಿರುವ ಕಿಣ್ವಗಳೇ ಕಾರಣ. ಇದೇ ರೀತಿ ‘ಬಿ’ ಗುಂಪಿನ ರಕ್ತದಲ್ಲಿ ಉತ್ಪಾದನೆಯಾಗುವ ‘ಪ್ರತಿಕಾಯ’ಕ್ಕೆ ‘ಎ’ ಗುಂಪಿನ ರಕ್ತಕಣದ ಹೊರಮೈಯ್ಯಲ್ಲಿ ಅಂಟಿಕೊಂಡಿರುವ ವಿಶಿಷ್ಟ ಸಕ್ಕರೆಯಂಶವನ್ನು ಪತ್ತೆ ಮಾಡುವ ಸಾಮರ್ಥ್ಯವಿರುತ್ತದೆ. ಈ ಸಕ್ಕರೆಯಂಶದ ಉತ್ಪಾದನೆಗೂ ಅದರಲ್ಲಿರುವ ಕಿಣ್ವಗಳೇ ಕಾರಣ. ‘ಪ್ರತಿಕಾಯ’ಗಳು ಉತ್ಪಾದನೆಯಾಗದಂತೆ ಮಾಡುವ ಆಲೋಚನೆ ವಿಜ್ಞಾನಿಗಳಿಗೆ ಬಂದದ್ದು ಇಪ್ಪತ್ತೈದು ವರ್ಷಗಳಿಗೂ ಹಿಂದೆ. ಕೆಲವೊಂದು ಕಾಫಿ ತಳಿಗಳ ಬೀಜದಲ್ಲಿರುವ ಕಿಣ್ವಗಳಿಗೆ ರಕ್ತಕಣಗಳಲ್ಲಿರುವ ‘ಬಿ’ ಪ್ರತಿಕಾಯಗಳನ್ನು ನಾಶ ಮಾಡುವ ಶಕ್ತಿಯಿರುವುದು ಯಾವುದೋ ಪ್ರಯೋಗವೊಂದರ ಸಂದರ್ಭದಲ್ಲಿ ಪತ್ತೆಯಾಯಿತು. ಆದರೆ ರಕ್ತವನ್ನು ‘ಬಿ’ ಪ್ರತಿಕಾಯಗಳಿಂದ ಮುಕ್ತಿಯಾಗಿಸಲು ಸೇರ್ಪಡೆ ಮಾಡಬೇಕಿದ್ದ ಕಾಫಿ ಬೀಜದ ಕಿಣ್ವದ ಪ್ರಮಾಣ ಹೆಚ್ಚಾಗಿತ್ತು. ಅಂದರೆ ಈ ವಿಧಾನದ ಆರೈಕೆ ಅಷ್ಟು ಕಾರ್ಯಕ್ಷಮತೆ ಹೊಂದಿರಲಿಲ್ಲ.
ಕ್ಲೌಸನ್ ಅವರ ತಂಡವು ಇಂಥ ಕಿಣ್ವಗಳ ಅನ್ವೇಷಣೆಯಲ್ಲಿ ತೊಡಗಿಕೊಂಡಾಗ ಸಹಸ್ರಾರು ಮಾದರಿಗಳು ಪತ್ತೆಯಾದವು. ಬ್ಯಾಕ್ಟೀರಿಯ ಹಾಗೂ ಶಿಲೀಂಧ್ರಗಳ (ಫಂಗಸ್) ಸುಮಾರು 2,500 ಜಾತಿಗಳ ಜೀವಕೋಶಗಳನ್ನು ಜಾಲಾಡಿದಾಗ ‘ಏ’ ಮತ್ತು ‘ಬಿ’ ಪ್ರತಿಕಾಯಗಳ ಉತ್ಪಾದನೆಯನ್ನು ತಡೆಗಟ್ಟುವ ಹಲವಾರು ಕಿಣ್ವಗಳು ಬೆಳಕಿಗೆ ಬಂದವು. ಈ ಕಿಣ್ವಗಳು ಕಾಫಿ ಬೀಜದ ಕಿಣ್ವಗಳಿಗಿಂತ ಸಹಸ್ರ ಪಟ್ಟು ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸಬಲ್ಲವಾಗಿದ್ದವು. ಇದೀಗ ವರದಿಯಾಗಿರುವಂತೆ ಅಮೆರಿಕದ ಮೆಸಾಶ್ಯುಸೆಟ್ಸ್‍ನಲ್ಲಿರುವ ‘ಝೈಮ್‍ಕ್ವೆಸ್ಟ್’ ಎಂಬ ಜೈವಿಕ ತಂತ್ರಜ್ಞಾನ ಕಂಪನಿಯು ಕ್ಲೌಸನ್ ನೇತೃತ್ವದ ತಂಡದಿಂದ ತಂತ್ರಜ್ಞಾನ ವರ್ಗಾವಣೆ ಮಾಡಿಕೊಂಡಿದೆ. ಈ ಕಂಪನಿಯು ನಿರ್ಮಿಸಿರುವ ಮೊದಲ ಮಾದರಿ ಯಂತ್ರದಲ್ಲಿ ರಕ್ತವನ್ನು ಒಂದು ನಳಿಕೆಯ ಮೂಲಕ ಹಾಯಿಸಿದರೆ, ಅದರೊಳಗೆ ಕಿಣ್ವಗಳು ಬೆರೆತು, ಪ್ರತಿಕಾಯಗಳನ್ನು ಕೇವಲ ಒಂದೂವರೆ ಗಂಟೆಗಳ ಕಾಲದಲ್ಲಿ ಬಡಿದು ಹಾಕಲಾಗುತ್ತದೆ. ಏಕ ಕಾಲದಲ್ಲಿ ಎಂಟು ಬಾಟಲಿ ರಕ್ತವನ್ನು ಊಡಿಸಬಹುದಾದ ಯಂತ್ರವನ್ನು ಸದ್ಯಕ್ಕೆ ತೀವ್ರವಾದ ಪರೀಕ್ಷೆಗಳಿಗೆ ಒಡ್ಡಲಾಗಿದೆ. ಹಿಂದಿನ ಎಲ್ಲಾ ಪ್ರಯತ್ನಗಳಿಗಿಂತಲೂ ತಮ್ಮ ಪ್ರಯೋಗಗಳು ಭಿನ್ನವಾಗಿವೆ ಎನ್ನುವ ಕ್ಲೌಸನ್ ಅವರು, ಈ ಯಶಸ್ಸಿಗೆ ನೀಡುವ ಕಾರ್‍ಅಣಗಳು ಹಲವು. ಕೆಂಪು ರಕ್ತಕಣಗಳಿಗೆ ಹೊಂದಿಕೊಂಡಂತಿರುವ ಸಕ್ಕರೆಯಂಶದ ರಚನೆ ಅತ್ಯಂತ ಕ್ಲಿಷ್ಟಕರವಾದದ್ದು. ಅವುಗಳನ್ನು ತಿಂದು ಜೀರ್ಣಿಸಿಕೊಳ್ಳಬಲ್ಲ ಕಿಣ್ವಗಳು ಹೆಚ್ಚು ಚುರುಕಾಗಿರಬೇಕು, ಜತೆಗೆ ವಿಭಿನ್ನ ರಚನೆಗಳನ್ನು ಗುರುತಿಸುವಂತಾಗಿರಬೇಕು. ಎಲ್ಲಕ್ಕೂ ಮಿಗಿಲಾಗಿ ದೇಹದ ಸುರಕ್ಷಾ ವ್ಯವಸ್ಥೆಯನ್ನು ಕೆರಳಿಸುವಂತಿರಬಾರದು. ಸರಳವಾಗಿ ಹೇಳಬೇಕೆಂದರೆ ಎಲ್ಲ ಗುಂಪಿನ (‘ಏ’, ‘ಬಿ’ ಹಾಗೂ ‘ಏಬಿ’) ರಕ್ತವನ್ನೂ ‘ಓ’ ಗುಂಪಿನ ರಕ್ತದಂತೆ ಪರಿವರ್ತಿಸುವ ಕಾರ್ಯ ಇಲ್ಲಿ ನಡೆಯುತ್ತದೆ.
ಯಾವುದೇ ಒಂದು ಸಂಶೋಧನೆಗೆ ಹೆಚ್ಚಿನ ಮಹತ್ವ ಸಿಗುವುದು ಅದು ಅಮೆರಿಕಕ್ಕೆ ಸಂಬಂಧಿಸಿದಾಗ ಮಾತ್ರ. ಅಮೆರಿಕ ದೇಶದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಪ್ರತಿಶತ ನಲವತ್ತಕ್ಕೂ ಹೆಚ್ಚು ಮಂದಿ ‘ಓ’ ಗುಂಪಿನ ರಕ್ತದವರು. ಅಂದರೆ ‘ಓ’ ಗುಂಪಿನ ರಕ್ತಕ್ಕೆ ಹೆಚ್ಚಿನ ಬೇಡಿಕೆಯಿರುತ್ತದೆ. ಜತೆಗೆ ಉಳಿದ ಗುಂಪಿನವರಿಗೂ ‘ಓ’ ಗುಂಪು ಹೊಂದಿಕೆಯಾಗುವುದರಿಂದ ಆ ಗುಂಪಿನ ರಕ್ತ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಜಾನವಾರುಗಳ ಮಿದುಳಿಗೆ ತಗುಲಿಕೊಂಡ ಕಾಯಿಲೆಯು ಅದರ ಮಾಂಸ ತಿಂದ ಮನುಷ್ಯನಿಗೂ ಬರಬಹುದೆಂಬ ಭೀತಿ ಕೆಲ ವರ್ಷಗಳ ಹಿಂದೆ ಜಗತ್ತಿನೆಲ್ಲೆಡೆ (ಅದರಲ್ಲೂ ಹೆಚ್ಚಾಗಿ ಅಮೆರಿಕದಲ್ಲಿ) ಹಬ್ಬಿದ್ದು ನಿಮ್ಮ ನೆನಪಿನಲ್ಲಿ ಇರಬಹುದು. ಅಮೆರಿಕ ದೇಶದಲ್ಲಿ ರಕ್ತವನ್ನು ದಾನವಾಗಿ ಪಡೆಯುವ ಮುನ್ನ ಆತ/ಆಕೆ ಯೂರೋಪ್ ದೇಶಗಳಿಗೆ ಇತ್ತೀಚೆಗೆ ಭೇಟಿ ನೀಡಿದ್ದನೆ/ಳೆ? ಎಂದು ಪರಿಶೀಲಿಸಲಾಗುತ್ತದೆ. ಕಾರಣ, ಜಾನವಾರುಗಳ ‘ಹುಚ್ಚು’ ರೋಗದ ರೋಗಾಣುಗಳು ಯೂರೋಪ್ ದೇಶದಿಂದ ತನ್ನ ದೇಶಕ್ಕೆ ಹರಿದು ಬರಬಾರದೆಂಬ ಮುನ್ನೆಚ್ಚರಿಕೆ. (ಇದಕ್ಕೆ ಪ್ರತೀಕಾರವೆಂಬಂತೆ ಯೂರೋಪ್ ದೇಶಗಳಲ್ಲಿ ಅಮೆರಿಕಕ್ಕೆ ಇತ್ತೀಚೆಗೆ ಭೇಟಿ ಕೊಟ್ಟ ತನ್ನ ನಾಗರೀಕರಿಂದ ರಕ್ತವನ್ನು ದಾನವಾಗಿ ಸ್ವೀಕರಿಸುವುದಿಲ್ಲ. ಕಾರಣ, ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ‘ಏಯ್ಡ಼್’ ರೋಗದ ‘ಎಚ್.ಐ.ವಿ. ವೈರಸ್ ಅವರಿಗೆ ಅಂಟಿಕೊಂಡಿರಬಹುದೆಂಬ ಭೀತಿ). ಈ ಒಂದು ನಿರ್ಬಂಧದಿಂದಲೂ ರಕ್ತ ದಾನಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಹೀಗಾಗಿ ಎಲ್ಲ ಗುಂಪೂ ಒಪ್ಪುವಂಥ ರಕ್ತ ಪೂರೈಕೆ ನಿರಂತರವಾಗಿರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕ್ಲೌಸನ್ ಪ್ರಯೋಗಗಳಿಗೆ ಹೆಚ್ಚಿನ ಧನ ಸಹಾಯ ಮಂಜೂರಾಗಿದೆ.
ಸಾಂಕ್ರಮಿಕ ರೋಗ ಹಬ್ಬಿರುವ ಸಂದರ್ಭಗಳಲ್ಲಿ, ನೈಸರ್ಗಿಕ ಅವಘಡಗಳು ಸಂಭವಿಸಿದಾಗ ಅಥವಾ ಯುದ್ಧದ ಸಮಯದಲ್ಲಿ ತುರ್ತಾಗಿ ರಕ್ತ ಅಗತ್ಯವಿರುತ್ತದಲ್ಲವೆ? ಇಂಥ ತುರ್ತು ಪರಿಸ್ಥಿತಿಗಳಲ್ಲಿ ರಕ್ತ ಗುಂಪಿನ ತಪಾಸಣೆ, ಹೊಂದಾಣಿಕೆ ಮತ್ತಿತರ ಕೆಲಸಗಳಿಗೆ ಹೆಚ್ಚಿನ ಸಮಯ ತಗಲುತ್ತದೆ. ರಕ್ತ ಕೊಡುವಷ್ಟರಲ್ಲಿ ಪ್ರಾಣಕ್ಕೇ ಸಂಚಕಾರ ಬಂದಿರಬಹುದು. ಎಷ್ಟೋ ಬಾರಿ ಆತುರದ ಪರೀಕ್ಷೆಗಳಲ್ಲಿ ತಪ್ಪು ಮಾಹಿತಿ ದೊರೆತು, ವಿರುದ್ಧ ಗುಂಪಿನ ರಕ್ತವನ್ನು ನೀಡುವ ಸಂಭವನೀಯತೆಯಿರುತ್ತದೆ. ಇಂಥ ಯಂತ್ರಗಳು ಎಲ್ಲ ಆಸ್ಪತ್ರೆಗಳಲ್ಲೂ ಸ್ಥಾಪನೆಯಾಗಿದ್ದರೆ, ಅರೆ-ವೈದ್ಯಕೀಯ ಸಿಬ್ಬಂದಿ ಸಹಾ ರಕ್ತ ಪೂರೈಕೆಯ ಕಾರ್ಯವನ್ನು ನಿರ್ವಹಿಸಬಹುದು. ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವವರ ಜೀವವನ್ನು ಉಳಿಸಲೂ ಬಹುದು. ಯೂರೋಪ್ ದೇಶಗಳಲ್ಲಿ ಪರಿಶೀಲನಾ ಪ್ರಯೋಗಗಳು ಅಂತಿಮ ಹಂತದಲ್ಲಿದ್ದು ಕ್ರಿ.ಶ.2011ರ ಹೊತ್ತಿಗೆ ಸಾಮಾನ್ಯ ಬಳಕೆಗೆ ಅವು ಲಭ್ಯವಾಗಬಹುದು. ಅಮೆರಿಕದಲ್ಲಿ ಇಂಥ ಯಂತ್ರಗಳ ಬಳಕೆಗೆ ಮತ್ತೂ ಒಂದೆರಡು ವರ್ಷಗಳ ಕಾಲ ಕಾಯಬೇಕಾಗಬಹುದು.
ರಕ್ತ ಜೀವ ದ್ರವ. ಇದು ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿ ಉತ್ಪತ್ತಿಯಾಗುತ್ತಲೇ ಇರುತ್ತದೆ. ಅಲ್ಪ ಮಟ್ಟದ ನಷ್ಟವನ್ನು ದೇಹವೇ ಕೆಲದಿನಗಳಲ್ಲಿ ಮರು ಸೃಷ್ಟಿ ಮಾಡಿಕೊಳ್ಳುತ್ತದೆ. ಆದರೆ ಕೃತತಕವಾಗಿ ರಕ್ತವನ್ನು ಉತ್ಪಾದಿಸುವುದು ಅಷ್ಟು ಸುಲಭವಲ್ಲ. ಇಂಥ ತಂತ್ರಜ್ಞಾನಗಳ ಸೃಷ್ಟಿಗೆ ವೈದ್ಯ ವಿಜ್ಞಾನ ಕ್ಷೇತ್ರದಲ್ಲಿ ಹಣ ಹೂಡಿಕೆಯಾಗಿದ್ದರೂ, ಅಗ್ಗದ ಸುಲಭವಾಗಿ ಉತ್ಪಾದಿಸಬಲ್ಲ ತಂತ್ರಜ್ಞಾನ ಆವಿಷ್ಕಾರವಾಗಿಲ್ಲ. ಹೀಗಾಗಿ ರಕ್ತ ಪೂರೈಕೆಗೆ ಮತ್ತೊಬ್ಬ ಆರೋಗ್ಯವಂತನ ದೇಹದಿಂದ ಹೊರತೆಗೆಯಲೇ ಬೇಕು. ಆಗಿಂದಾಗ್ಗೆ ರಕ್ತ ದಾನ ಮಾಡುವುದು ನಮ್ಮ ಆರೋಗ್ಯಕ್ಕೂ ಹಿತಕರ. ಪತ್ರಕರ್ತ ಮಿತ್ರ ಪ್ರತಾಪ್ ಸಿಂಹ ಹೇಳುವಂತೆ ಅದೊಂದು ‘ನಮ್ಮ ಕೊಬ್ಬು ಇಳಿಸುವ ಕೆಲಸ’. ಕಾರಣ ರಕ್ತದಲ್ಲಿ ಕೊಲೆಸ್ಟಿರಾಲ್ (ಕೊಬ್ಬಿನ) ಅಂಶ ಹೆಚ್ಚಿದ್ದರೆ, ರಕ್ತ ದಾನ ಮಾಡುವುದರಿಂದ ಅದರ ಸ್ವಲ್ಪ ಪಾಲು ಮತ್ತೊಬ್ಬರಿಗೆ ವರ್ಗಾವಣೆಯಾಗುತ್ತದೆ. ರಕ್ತ ದಾನದ ಮಹತ್ವದ ಬಗ್ಗೆ ಹೆಚ್ಚಿನ ಮಟ್ಟದ ಪ್ರಚಾರ ಸಿಕ್ಕಲ್ಲಿ, ತುರ್ತು ಪರಿಸ್ಥಿತಿಯಲ್ಲಿರುವವರ ಜೀವಕ್ಕೆ ರಕ್ಷಣೆ ಸಿಕ್ಕಂತೆ. ಕ್ಲೌಸನ್ ಅವರ ಯಂತ್ರಗಳು ಅಗ್ಗದ ದರದಲ್ಲಿ ಸಿಗುವಂತಾದರೆ, ರಕ್ತ ವರ್ಗಾವಣೆಯೆಂಬುದು ಸಮಸ್ಯೆಯೇ ಅಲ್ಲ.

(09-04-2007)
4 comments:
ಪ್ರೀತಿಯ ಸುಧೀಂದ್ರ
ಈ ಮೊಬೈಲು ಕಂಪೆನಿಗಳು ಸುಖಾಸುಮ್ಮನೆ ಮೆಸೇಜು ಕಳಿಸಿ ಎಸ್ಸೆಮ್ಮೆಸ್ಸಿನಿಂದ ಲಾಭ ಮಾಡಿಕೊಳ್ಳಲು ನೋಡುತ್ತಿದ್ದವು. ಹಾಗೇ ಅವು ಅನೇಕ ಸಲ ಅಪರೂಪದ ರಕ್ತದ ಗುಂಪಿನ ಮಾಹಿತಿ ಕೊಟ್ಟು ದಾರಿತಪ್ಪಿಸುತ್ತಿದ್ದವು. ಇನ್ನು ಮೇಲೆ ಅಂಥ ಗಾಬರಿ ಏನಿಲ್ಲ ಅನ್ನಿಸುತ್ತಿದೆ. ಅಂದ ಹಾಗೆ ರಕ್ತ ಗುಂಪುಗಾರಿಕೆಯಿಂದ ಮುಕ್ತವಾದರೆ ರಕ್ತ ಬಸಿದು ಸೃಷ್ಟಿಸುವ ಸಾಹಿತ್ಯ ಕ್ಷೇತ್ರದಲ್ಲೂ ಗುಂಪುಗಾರಿಕೆ ತಪ್ಪಬಹುದಾ..
ಜೋಗಿ
ಜೋಗಿ ಸರ್,
ಇಲ್ಲಿ ಕೆಂಪು ರಕ್ತಕಣಗಳನ್ನು ಗುಂಪುಗಾರಿಕೆಯಿಂದ ಮುಕ್ತವಾಗಿಸುವ ಪ್ರಯತ್ನದ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. ಇಂಥ ಗುಂಪುಗಾರಿಕೆ ಬಿಳಿ ರಕ್ತಕಣಗಳಲ್ಲಿ ಇಲ್ಲ. ಇದೇ ತರ್ಕವನ್ನು ಮುಂದುವರಿಸಿದರೆ ಕೆಂಪು ಸಾಹಿತ್ಯ ಕ್ಷೇತ್ರವು ಗುಂಪುಗಾರಿಕೆಯಿಂದ ಮುಕ್ತವಾಗಬಹುದು/ವಾಗಬೇಕು. (ಕೇಸರಿ ಸಾಹಿತ್ಯವೂ ಸಹಾ!). ಉಳಿದಂತೆ ಕಪ್ಪು-ಬಿಳುಪಿನ ಸಾಹಿತ್ಯ ಎಂದೆಂದಿಗೂ ಗುಂಪುಗಾರಿಕೆಯಿಂದ ಮುಕ್ತ ಮುಕ್ತ ಮುಕ್ತ .... ವಾಗಿದೆ.
- ಸುಧೀ
Sir,
Today I have read ur article. U have written that there is no antigen in neg.Blood group, but only in positive. That's why grouping is done, to avoid unfavourable circumstances. Attempts r made to produce blood without antigen. Instead of that neg. Blood group is not suitable for positive, and it is rarely seen. Does Neg blood represent any deficiency? can u clear my doubt sir? please. I am II PU biology stu.
- 9343287406@sms.ricmail.com
Dear Friend,
Blood is classified as 'positive or 'negative' with the 'presence' or 'absence' of 'Rh' (short form for Rhesus) antigens respectively in the Red Blood Cells (RBCs). Generally the people with 'negative' blood are smaller in number. The presence or absence of 'Rh' antigen does not really
matter for the growth of human beings. Excepting that negative
blood is rarer to find than the positive blood, there is
absolutely no deficiency with the negative people.
Further, the ABO blood-type system is based on the presence or absence of the sugar-based antigens 'A' and 'B' on red blood cells. Type O blood cells have neither A nor B antigens, so may be safely transfused into anyone. But types A, B and AB blood do, and cause life-threatening immune
reactions if they are given to patients with a different blood
group.
Researchers have been trying to find a way to efficiently convert different human blood types into a neutral type by stripping blood of antigens. This blood can be given to any patient. Which means blood has been made suitable for all.
Hope this has clarified your doubts. Please do not worry much on this issue.
- Haldodderi
http://netnota.blogspot.com
Post a Comment